Welcome to Muslimcourse.com, The Guide to the Right Path

 

can be.

ಪ್ರವಾದಿ (ಸ) ರವರ ಜನನ ಮತ್ತು ದೌತ್ಯ

ರಬೀವುಲ್ ಅವ್ವಲ್  ಪ್ರವಾದಿ ಮುಹಮ್ಮದ್  ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಜನಿಸಿದ ಮಾಸವಾಗಿದೆ,  ಪ್ರತಿ ರಬೀವುಲ್ ಅವ್ವಲ್ ತಿಂಗಳು ಸತ್ಯವಿಶ್ವಾಸಿಗಳಿಗೆ ಆವೇಶವಾಗಿದೆ,  ಸಂತೋಷಪಡದಿರುವುದು ಹೇಗೆ ??ಸರ್ವ ಸೃಷ್ಟಿಗಳುಗೆ ಅನುಗ್ರಹವಾಗಿ  ಅಲ್ಲಾಹು ನಿಯೋಗಿಸಿದ ಪ್ರವಾದಿ (ಸ) ರವರ ಜನನವೇ  ಅನೇಕ ಅದ್ಭುತಗಳೊಂದಿಗೆ ಯಾಗಿತ್ತು ಎಂಬುದನ್ನು ಇಸ್ಲಾಮೀ ಇತಿಹಾಸವು ಬಹಳಷ್ಟು ವಿವರಗಳನ್ನು ನಮ್ಮ ಮುಂದಿಡುತ್ತದೆ. ಅದೆಲ್ಲವೂ ಜನರನ್ನು ಸಂಸ್ಕರಿಸಲು ನಿಯೋಗಿಸಲ್ಪಡುವ ಈ ಮಹಾ ವ್ಯಕ್ತಿಯನ್ನು ಗೌರವಿಸಿ ಅಲ್ಲಾಹು ಅವರಿಗೆ ನೀಡಿದ ಸ್ಥಾನ ಮತ್ತು ಅನುಗ್ರಹಗಳಾಗಿವೆ. ಜನಿಸುವಾಗಲೇ ತಂದೆಯು ಮರಣಹೊಂದಿದ್ದರು,  ತಾಯಿ ನಬಿಯವರಿಗೆ ಆರು ವಯಸ್ಸಾಗುವಾಗ ಮೃತ ಹೋಂದಿದರು,  ತಂದೆ- ತಾಯಿ ಯಿಲ್ಲದ ಈ ಮಗುವಿಗೆ ಅಲ್ಲಾಹನು ಅಜ್ಜ ಮತ್ತು ಚಿಕ್ಕಪ್ಪ ಅಬೂ ತಾಲಿ ಬ್ ರವರ ಆಶ್ರಯಕೊಟ್ಟನು.

ಅತಿ ಸಣ್ಣ ಪ್ರಾಯ ದಿಂದಲೇ ಉತ್ತಮ ಮತ್ತು ಉದಾತ್ತ ಸ್ವಭಾವಗಳ ನ್ನೊ ಹೊಂದಿದ್ದ ನಬಿ (ಸ) ರವರು  ಜನರ ಸಮಸ್ಯೆಗಳಿಗೆ ಪರಿಹರಿಸುವವರಾಗಿಯೂ , ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಅನಾಥರಿಗೆ ಆಶ್ರಯ ನೀಡುವವರಾಗಿಯೂ , ಸಂಸ್ಕಾರ ವಿಲ್ಲದ ಜನರ ಕೆಟ್ಟ ಪ್ರವೃತಿಗಳ ಬಗ್ಗೆ ತುಂಬಾ ಮನನೊಂದಿದ್ದರು, ಏಕಾಂತವಾಗಿ ಜಬಲ್ ನೂರ್ ನ ಮೇಲೆಯಿರುವ ಹಿರಾ ಗುಹೆಯಲ್ಲಿ ಅಲ್ಲಾಹನಲ್ಲಿ   ಪ್ರಾರ್ಥಿಸುತ್ತಾ   ಕಳೆದ ಪ್ರವಾದಿ (ಸ) ರವರಿಗೆ ನಲ್ವತ್ತನೇ ವಯಸ್ಸಿನಲ್ಲಿ  ಪ್ರವಾದಿತ್ವ ವನ್ನು ಕೊಟ್ಟನು, ಅದೇ  ಎಲ್ಲಾ ಕೆಡುಕುಗಳ ವಾಹಕರಾಗಿದ್ದ ಅಂದಿನ ಜನತೆಯನ್ನುಸಮುದ್ದರಿಸಲು, ಅವರಿಗೆ ಒಳಿತು –ಕೆಡುಕು ಭೊಧಿಸಿ ಅವರನ್ನು ಸತ್ಯ ಧರ್ಮವಾದ ಇಸ್ಲಾಮ್ ನ ಕಡೆಗೆ ಅಹ್ವಾನಿಸುವ ಮಹತ್ತರವಾದ ಹೊಣೆಗಾರಿಕೆಯನ್ನು  ಅಲ್ಲಾಹು ಕೊಟ್ಟನು.

 

 

ರಮದಾನ್ ಪುಣ್ಯಗಳ ಕೂಯ್ಲು ಕಾಲ

 

ಪವಿತ್ರ  ರಮದಾನ್ ನಮ್ಮ ಮುಂದೆ ಆಗಮಿಸಿದೆ ( ಅಲ್ ಹಮ್ದುಲಿಲ್ಲಾಹ್ )  ಸತ್ಯ ವಿಶ್ವಾಸಿಯ ಮಟ್ಟಿಗೆ ಇದು ವಸಂತಕಾಲ, ಪ್ರತಿಯೊಂದು ನಿಮಿಷವೂ ಅತ್ಯಮೂಲ್ಯವಾದುದು, ತನ್ನ ಹೃದಯವನ್ನು ಸಂಸ್ಕರಿಸಿ ಜೀವನಕಕ್ಕೆ ಸಂಶುದ್ದಿಯನ್ನು ಪಡೆಯಬೇಕಾದ ಕಾಲವಾಗಿದೆ.ಆದುದರಿಂದ ರಮದಾನ್ ನ ಆರಂಭದಿಂದಲೇ ನಾವು ರಮದಾನನ್ನು ಸದುಪಯೋಗಪಡಿಸುವುದಕ್ಕೆ ವ್ಯವಸ್ಥಿತವಾದ ರೂಪುರೇಖೆಯನ್ನು ಮಾಡಬೇಕಾಗಿದೆ
ಪ್ರವಾದಿ (ಸ) ರವರು  ರಮದಾನ್ ಕ್ಕಿಂತ ಎರಡು ತಿಂಗಳ ಮುಂಚೆಯೇ  " ಓ ಅಲ್ಲಾಹನೇ ನಮಗೆ ರಜಬ್ ಮತ್ತು ಶ ಅಬಾನ್ ತಿಂಗಳಲ್ಲಿ ಬರ್ಕತ್ ನೀಡು, ರಮದಾನ್ ತಿಂಗಳನ್ನು ನಮಗೆ ಒದಗಿಸು " ಎಂದು ಪ್ರಾರ್ಥಿಸುತ್ತಿದ್ದರು.
ರಮದಾನ್ ನ್ನು ಸ್ವೀಕರಿಸಲು ಮಾನಸಿಕವಾಗಿ ಸಿದ್ದರಾಗಬೇಕೆಂಬ ತತ್ವವನ್ನು ಈ ಪ್ರಾರ್ಥನೆ ನಡೆಸುವ ಮೂಲಕ ಪ್ರವಾದಿ (ಸ) ರವರು ನಮಗೆ ಕಲಿಸಿಕೊಟ್ಟರು.
 ಪ್ರವಾದಿ (ಸ) ರವರು ರಮದಾನ್ ಮಾಸದ ಆಗಮನದ ಬಗ್ಗೆ ಸುವಾರ್ತೆ ಕೊಡುತ್ತಾ ಹೀಗೆಂದರು :
ನಿಮಗೆ ಪವಿತ್ರ ರಮದಾನ್ ಮಾಸ ಆಗಮಸಿದೆ, ಈ ಮಾಸದಲ್ಲಿ ವೃತಾಚರಣೆ ನಿಮಗೆ ಅಲ್ಲಾಹು ಕಡ್ಡಾಯ ಗೊಳಿಸಿದ್ದಾನೆ, ಪ್ರಸ್ತುತ ತಿಂಗಳಲ್ಲಿ ಸ್ವರ್ಗದ ಬಾಕಿಲುಗಳು ತೆರೆಯಲ್ಪಡಲಾಗುವುದು, ನರಕದ ಬಾಕಿಲುಗಳು ಮುಚ್ಚಲ್ಪಡುತ್ತವೆ, ಶೈತಾನ್ ಗಳನ್ನು ಬಂದಿಸಲ್ಪಡುತ್ತವೆ, ಪ್ರಸ್ತುತ ತಿಂಗಳಲ್ಲಿ ಲೈಲತುಲ್ ಖದ್ರ್ ಎಂಬ ರಾತ್ರಿಯಿದೆ, ಆ ರಾತ್ರಿ ಸಾವಿರ ತಿಂಗಳುಗಳಿಗಿಂತ ಶ್ರೇಷ್ಟತೆಯಿರುವ ರಾತ್ರಿಯಾಗಿದೆ, ಯಾರಿಗಾದರೂ ಅದರ ಫುಣ್ಯವು ತಡೆಯಲ್ಪಡುವುದಾದರೆ ಖಂಡಿತವಾಗಿಯೂ ಅವನು ಫುಣ್ಯದಿಂದ ತಡೆಯಲ್ಪಟ್ಟ ವನಾಗಿದ್ದಾನೆ  ( ಹದೀ ಸ್ ಇಬ್ನ್ ಮಾಜ; ಹದೀಸ್ ನಂಬ್ರ 1642) ಮುಂದೆ ಓದಿರಿ

ಫಿತ್ರ್ ಝಕಾತ್ ಇಸ್ಲಾಮ್ ನಿರ್ದೇಶಿಸುವ ವಿಧಾನ

ಇಬ್ನ್ ಉಮರ್ (ರ) ಹೇಳಿದರು : ಅಲ್ಲಾಹನ ರಸೂಲ್ (ಸ) ಫಿತ್ರ್ ಝಕಾತ್ಅನ್ನು ಖರ್ಜೂರದಿಂದ ಒಂದು ಸ್ವಾಹ್ ಅಥವಾ ಗೋದಿಯಿಂದ  ಒಂದು ಸ್ವಾಹ್ ನ್ನು ಮುಸ್ಲಿಮರಲ್ಲಿ ದಾಸ , ಸ್ವತಂತ್ರ ವ್ಯಕ್ತಿ, ಪುರುಷ , ಸ್ತ್ರೀ  , ಮಕ್ಕಳು ಮತ್ತು ದೊಡ್ಡವರ ಮೇಲೆ  ಕಡಾಯಗೊಳಿಸಿದರು , ಜನರು ಈದ್ ನಮಾಝ್ ಗೆ ಹೋಗುವ ಮುಂಚೆ ಅದನ್ನು ಕೊಡಲು ಆಜ್ಞಾಪಿಸಿದರು ( ಹದೀಸ್ ಬುಖಾರಿ)

 

 ಲೇಖನಗಳು




 ಲೇಖನಗಳು




 ಲೇಖನಗಳು