ಪವಿತ್ರ ರಮದಾನ್ ಪುಣ್ಯಗಳ ಕೊಯ್ಲ ಕಾಲ
ಪವಿತ್ರ ರಮದಾನ್ ನಮ್ಮ ಮುಂದೆ ಆಗಮಿಸಿದೆ ( ಅಲ್ ಹಮ್ದುಲಿಲ್ಲಾಹ್ ) ಸತ್ಯ ವಿಶ್ವಾಸಿಯ ಮಟ್ಟಿಗೆ ಇದು ವಸಂತಕಾಲ, ಪ್ರತಿಯೊಂದು ನಿಮಿಷವೂ ಅತ್ಯಮೂಲ್ಯವಾದುದು, ತನ್ನ ಹೃದಯವನ್ನು ಸಂಸ್ಕರಿಸಿ ಜೀವನಕಕ್ಕೆ ಸಂಶುದ್ದಿಯನ್ನು ಪಡೆಯಬೇಕಾದ ಕಾಲವಾಗಿದೆ.ಆದುದರಿಂದ ರಮದಾನ್ ನ ಆರಂಭದಿಂದಲೇ ನಾವು ರಮದಾನನ್ನು ಸದುಪಯೋಗಪಡಿಸುವುದಕ್ಕೆ ವ್ಯವಸ್ಥಿತವಾದ ರೂಪುರೇಖೆಯನ್ನು ಮಾಡಬೇಕಾಗಿದೆ
ಪ್ರವಾದಿ (ಸ) ರವರು ರಮದಾನ್ ಕ್ಕಿಂತ ಎರಡು ತಿಂಗಳ ಮುಂಚೆಯೇ " ಓ ಅಲ್ಲಾಹನೇ ನಮಗೆ ರಜಬ್ ಮತ್ತು ಶ ಅಬಾನ್ ತಿಂಗಳಲ್ಲಿ ಬರ್ಕತ್ ನೀಡು, ರಮದಾನ್ ತಿಂಗಳನ್ನು ನಮಗೆ ಒದಗಿಸು " ಎಂದು ಪ್ರಾರ್ಥಿಸುತ್ತಿದ್ದರು.ರಮದಾನ್ ನ್ನು ಸ್ವೀಕರಿಸಲು ಮಾನಸಿಕವಾಗಿ ಸಿದ್ದರಾಗಬೇಕೆಂಬ ತತ್ವವನ್ನು ಈ ಪ್ರಾರ್ಥನೆ ನಡೆಸುವ ಮೂಲಕ ಪ್ರವಾದಿ (ಸ) ರವರು ನಮಗೆ ಕಲಿಸಿಕೊಟ್ಟರು

ಪ್ರವಾದಿ (ಸ) ರವರು ರಮದಾನ್ ಮಾಸದ ಆಗಮನದ ಬಗ್ಗೆ ಸುವಾರ್ತೆ ಕೊಡುತ್ತಾ ಹೀಗೆಂದರು :
ನಿಮಗೆ ಪವಿತ್ರ ರಮದಾನ್ ಮಾಸ ಆಗಮಸಿದೆ, ಈ ಮಾಸದಲ್ಲಿ ವೃತಾಚರಣೆ ನಿಮಗೆ ಅಲ್ಲಾಹು ಕಡ್ಡಾಯ ಗೊಳಿಸಿದ್ದಾನೆ, ಪ್ರಸ್ತುತ ತಿಂಗಳಲ್ಲಿ ಸ್ವರ್ಗದ ಬಾಕಿಲುಗಳು ತೆರೆಯಲ್ಪಡಲಾಗುವುದು, ನರಕದ ಬಾಕಿಲುಗಳು ಮುಚ್ಚಲ್ಪಡುತ್ತವೆ, ಶೈತಾನ್ ಗಳನ್ನು ಬಂದಿಸಲ್ಪಡುತ್ತವೆ, ಪ್ರಸ್ತುತ ತಿಂಗಳಲ್ಲಿ ಲೈಲತುಲ್ ಖದ್ರ್ ಎಂಬ ರಾತ್ರಿಯಿದೆ, ಆ ರಾತ್ರಿ ಸಾವಿರ ತಿಂಗಳುಗಳಿಗಿಂತ ಶ್ರೇಷ್ಟತೆಯಿರುವ ರಾತ್ರಿಯಾಗಿದೆ, ಯಾರಿಗಾದರೂ ಅದರ ಫುಣ್ಯವು ತಡೆಯಲ್ಪಡುವುದಾದರೆ ಖಂಡಿತವಾಗಿಯೂ ಅವನು ಫುಣ್ಯದಿಂದ ತಡೆಯಲ್ಪಟ್ಟ ವನಾಗಿದ್ದಾನೆ ( ಹದೀ ಸ್ ಇಬ್ನ್ ಮಾಜ; ಹದೀಸ್ ನಂಬ್ರ 1642)
ಸಲ್ಮಾನುಲ್ ಫಾರಿಸೀ (ರ) ಹೇಳುತ್ತಾರೆ ;
ಪ್ರವಾದಿ (ಸ) ರವರು ಶ ಅಬಾನ್ ಕೊನೆಯ ದಿನದಂದು ಸಹಾಬಿಗಳನ್ನುದ್ದೇಶಿಸಿ ಭಾಷಣ ಮಾಡುತ್ತಾ ಹೇಳಿದರು
“ನಿಮಗೆ ಅನುಗ್ರಹೀತ ಮಹತ್ತರವಾದ ರಮದಾನ್ ಮಾಸ ಆಗಮಿಸುತ್ತಿದೆ, ಪ್ರಸ್ತುತ ತಿಂಗಳಲ್ಲಿ ಸಾವಿರ ತಿಂಗಳುಗಳಿಗಿಂತ ಶ್ರೇಷ್ಟ ರಾತ್ರಿಯೊಂದಿದೆ ಅದರ ಹಗಲಿನಲ್ಲಿ ವೃತನುಷ್ಟಿಸಲು ಅಲ್ಲಾಹು ಕಡ್ದಾಯಗೊಳಿಸಿದ್ದಾನೆ ಮತ್ತು ಅದರ ರಾತ್ರಿಯಲ್ಲಿ ನಮಾಝ್ ಮಾಡಲು ಸುನ್ನತ್ ಮಾಡಿರುವನು, ಯಾರದರೂ ಈ ಮಾಸದಲ್ಲಿ ಯಾವುದೇ ಒಂದು ಒಳಿತಾದ ಕಾರ್ಯವನ್ನು ಮಾಡಿದರೆ ಅವನು ರಮದಾನೇತರ ಮಾಸದಲ್ಲಿ ಒಂದು ಪರ್ಳ್ ಮಾಡಿದವನಂತೆ, ರಮದಾನ್ ಸಹನೆಯ ತಿಂಗಳಾಗಿದೆ, ಸಹನೆಯ ಪ್ರತಿಫಲ ಸ್ವರ್ಗವಾಗಿದೆ. ಪರಸ್ಪರ ಸಹಾಯ ಸಹಕಾರ ಮಾಡುವ ತಿಂಗಳಾಗಿದೆ, ಸತ್ಯ ವಿಶ್ವಾಸಿಯ ಆಹಾರವನ್ನು ಹೆಚ್ಚಿಸಲ್ಪಡುತ್ತದೆ, ಈ ತಿಂಗಳಲ್ಲಿ ನಾಲ್ಕು ಕಾರ್ಯಗಳನ್ನು ಅಲ್ಲಾಹನಲ್ಲಿ ಕೇಳುವುದನ್ನು ಹೆಚ್ಚಿಸಬೇಕು, ಅವುಗಳಲ್ಲಿ ಎರಡು ಕಾರ್ಯಗಳನ್ನು ನೀವು ಹೆಚ್ಚಿಸುವುದರಿಂದ ನಿಮ್ಮ ಪ್ರಭು ನಿಮ್ಮನ್ನು ತೃಪ್ತಿಪಡುವನು ಮತ್ತೆರಡು ಕಾರ್ಯಗಳು ನಿಮಗೆ ಅದರ ಬಗ್ಗೆ ಕೇಳುವುದು ಅನಿವಾರ್ಯತೆಯಿಂದ ಕೂಡಿದೆ.
ನಿಮ್ಮ ರಬ್ಬ್ ನಿಮ್ಮ ಬಗ್ಗೆ ತೃಪ್ತಿಪಡುವ ಕಾರ್ಯಗಳು : ( 1) ಅಲ್ಲಾಹನಲ್ಲದೇ ಬೇರೆ ಯಾರೂ ಆರಾಧ್ಯನಿಲ್ಲ ವೆಂಬ ಶಹಾದತ್ (ಅಶ್ ಹದು ಅಲ್ಲಾಇ ಲಾಹ ಇಲ್ಲಲ್ಲಾಹ್ ) ಆಗಿದೆ ( 2) ಇಸ್ತಿಗ್ಫಾರ್ = ಪಾಪ ಮೋಕ್ಷವನ್ನು ಕೇಳುವುದು
ನಿಮಗೆ ಕೇಳಲು ಅನಿವಾರ್ಯವಾದ ಎರಡು ಕಾರ್ಯಗಳು ; (3) ನೀವು ಅಲ್ಲಾಹನಲ್ಲಿ ಸ್ವರ್ಗವನ್ನು ಕೇಳುವುದು ( 4) ನರಕದಿಂದ ಮೋಕ್ಷವನ್ನು ಅಲ್ಲಾಹನಲ್ಲಿ ಕೇಳುವುದು ( ಹದೀಸ್ ಇಬ್ನ್ ಖುಝೈಮಃ )
ಈ ನಾಲ್ಕುಕಾರ್ಯಗಳನ್ನು ಒಳಗೊಳ್ಳಿಸಿಕೊಂಡಿರುವ ಪ್ರಾರ್ಥನೆ ಹೀಗಿದೆ, ಇದನ್ನು ರಮದಾನ್ ನಲ್ಲಿ ತುಂಬಾ ಹೆಚ್ಚಿಸಬೇಕು
اشهدُ اَن لااِلهَ اِلا اللهُ اَستغفرُ اللهَ اللهمَّ اِنيِّ اَسئلُكَ اْلجَنةَ وَ اَعوذُ بِكَ مِن النار
ರಮದಾನ್ ನ ಪ್ರತಿಯೊಂದು ರಾತ್ರಿಯಲ್ಲಿ “ ಓ ಒಳಿತನ್ನು ಬಯಸುವವನೇ ಮುಂದೆ ಧಾವಿಸಿ ಬಾ, ಓ ಕೆಡುಕನ್ನು ಬಯಸುವವನೇ ಕೆಡುಕನ್ನು ಕೊನೆಗೊಳಿಸು” ಎಂದು ಅಲ್ಲಾಹನ ಮಲಕ್ ಕರೆದು ಹೇಳುತ್ತದೆ
( ಹದೀಸ್ ಇಬ್ನ್ ಮಾಜ )
ರಮದಾನ್ ನ ವೃತಾಚರನೆಗೆ ತುಂಬಾ ಪುಣ್ಯಗಳಿವೆ, ತನ್ನ ಹಸಿವೆ ಬಾಯಾರಿಕೆ, ದೇಹೇಚ್ಛೆಗಳು ಮನಸ್ಸಿನ ಆಶೆ ಗಳು, ಎಲ್ಲವೂ ಅಲ್ಲಾಹನಿಗಾಗಿ ಮಾತ್ರ ನಿಗ್ರಹಿಸಿ ವೃತಾಚರಣೆ ಮಾಡಿದರೆ ಅವನ ವೃತವು ಸಂಪೂರ್ಣವಾಗುವುದು.
ಅಬೂಹುರೈರ (ರ) ವರದಿ ; ಪ್ರವಾದಿ ( ಸ) ಹೇಳುತ್ತಾರೆ: ಯಾರಾದರೂ ರಮದಾನ್ ಮಾಸ ಅಲ್ಲಾಹನಲ್ಲಿ ವಿಶ್ವಾಸ ಮತ್ತು ಪ್ರತಿಫಲವನ್ನು ಬಯಸಿ ವೃತಾಚರಣೆ ಮಾಡಿದರೆ ಅವನು ಮಾಡಿದ ಪಾಪಗಳೆಲ್ಲವನ್ನು ಮನ್ನಿಸಲ್ಪಡುವುದು ( ಅಬೂದಾವೂದ್. ಹದೀಸ್ ನಂಬ್ರ : 1372)
ರಮದಾನ್ ಮಾಸದ ಮೊದಲನೆಯ ಹತ್ತು ದಿನಗಳು = ಅಲ್ಲಾಹನು ವಿಶೇಷ ಅನುಗ್ರಹ ಗಳನ್ನು ನೀಡುವ ದಿನಗಳು ,
ದ್ವಿತೀಯ ಹತ್ತು ದಿನಗಳು = ವಿಶೇಷ ಪಾಪ ಮೋಕ್ಷ ನೀಡಲ್ಪಡುವ ದಿನಗಳು,
ಮತ್ತು ಕೊನೆಯ ಹತ್ತು ದಿನಗಳು = ನರಕದಿಂದ ಅವನ ದಾಸರನ್ನು ವಿಮುಕ್ತಿಗೊಳಿಸುವ ದಿನಗಳು.
ಆದ್ದರಿಂದ ಪ್ರಸ್ತುತ ದಿನಗಳಲ್ಲಿರುವ ಮಹತ್ವವನ್ನು ತಿಳಿದು ಸತ್ಕರ್ಮಗಳಲ್ಲಿ ತೊಡಗಬೇಕು
ರಮದಾನ್ ಉಪವಾಸದ ಉದ್ದೇಶ
ರಮದಾನ್ ವೃತವನ್ನು ಅನುಷ್ಟಿಸುವ ಮೂಲಕ ತಖ್ವಾ ( ಸಂಪೂರ್ಣ ಅಲ್ಲಾಹನ ವಿಧಿ ನಿಶೇಧಗಳನ್ನು ಪಾಲಿಸಿ ಭಯಭಕ್ತಿಯಿರುವ ಅವಸ್ಥೆ ) ನಮ್ಮಲ್ಲಿ ಉಂಟಾಗಬೇಕು.
ಅಲ್ಲಾಹು ಹೇಳುತ್ತಾನೆ :
ಓ ಸತ್ಯ ವಿಶ್ವಾಸಿಗಳೇ ; ನೀವು ಭಯ ಭಕ್ತಿಯುಳ್ಳವರಾಗಲೆಂದು ನಿಮ್ಮ ಪೂರ್ವಿಕರ ಮೇಲೆ ಉಪವಾಸವನ್ನು ಕಡ್ಡಾಯಗೊಳಿಸಿದಂತೆ ನಿಮ್ಮ ಮೇಲೂ ಉಪವಾಸವನ್ನು ಕಡ್ಡಾಯಗೊಳಿಸಲಾಗಿದೆ ,( ಕುರಾನ್ )
ಅನಾವಶ್ಯಕ ಕಾರ್ಯಗಳಿಂದ ದೂರವಿರುವುದು
ಉಪವಾಸದಲ್ಲಿ ಕೇವಲ ಅನ್ನ ಪಾನೀಯಗಳನ್ನು ಮಾತ್ರ ಉಪೇಕ್ಷಿಸುವುದಲ್ಲ, ಬರೀ ಅನ್ನ ಪಾನೀಯಗಳನ್ನು ಉಪೇಕ್ಷಿಸಿದರೆ ಸಂಪೂರ್ಣ ಉಪವಾಸವಾಗುವುದಿಲ್ಲ, ಅನಾವಶ್ಯಕ ಮಾತುಗಳು ಮತ್ತು ಅನಾವಶ್ಯಕ ಪ್ರವೃತಿಗಳನ್ನು ಕೂಡಾ ಉಪೇಕ್ಷಿಸತಕ್ಕದ್ದು.
ಪ್ರವಾದಿ (ಸ) ಹೇಳಿದರು; ಯಾರಾದರೂ ಅನಾವಶ್ಯಕ ಮಾತುಗಳು ಮತ್ತು ಅನಾವಶ್ಯಕ ಕರ್ಮಗಳನ್ನು ಉಪೇಕ್ಷಿಸದಿದ್ದರೆ ಅವನು ಕೇವಲ ಅನ್ನ ಪಾನೀಯಗಳನ್ನು ಉಪೇಕ್ಷಿಸುವುದರಲ್ಲಿ ಅಲ್ಲಾಹನಿಗೆ ಯಾವುದೇ ಅವಶ್ಯಕತೆಯಿಲ್ಲ. ( ಹದೀಸ್ )
ತರಾವೀಹ್ ನಮಾಝ್
ರಮದಾನ್ ನ ರಾತ್ರಿಗಳಲ್ಲಿ ಮಾತ್ರ ವಿರುವ ಪ್ರತ್ಯೇಕ ಸುನ್ನತ್ ನಮಾಝ್ ನ್ನು ತರಾವೀಹ್ ಎಂದು ಕರೆಯಲಾಗುತ್ತದೆ
ಇದು ಇಪ್ಪತ್ತು ರಕ್ ಅತ್ ಗಳಾಗಿವೆ, ಎರಡು – ಎರಡು ರಕ್ ಹ ತ್ ಗಳಾಗಿ ನಿರ್ವಹಿಸಬೇಕು. ಪವಿತ್ರ ಮಕ್ಕಾ ಮತ್ತು ಮದೀನ ಮಸೀದಿಗಳಲ್ಲಿ ಪ್ರವಾದಿ ( ಸ) ರವರ ಕಾಲದಿಂದ ಮೊದಲುಗೊಂಡು ಈ ತನಕ ಇಪ್ಪತ್ತು ರಕ್ ಅತ್ ಗಳಾಗಿಯೇ ನಿರ್ವಹಿಸಲಾಗುತ್ತದೆ. ಹದೀಸ್ ಗಳ ಪುರಾವೆಯೂ ಸ್ವಹಾಬಿಗಳ ಆಚರಣೆಯೂ , ಇಮಾಮರುಗಳ ಗ್ರಂಥಗಳು ಮತ್ತು ಲೋಕ ಮುಸ್ಲಿಮರ ಪಾರಂಪರ್ಯವೂ ಇದನ್ನೇ ಸಾಬೀತುಪಡಿಸುತ್ತದೆ.
ಪ್ರವಾದಿ (ಸ) ಹೇಳುತ್ತಾರೆ : ಯಾರಾದರೂ ಅಲ್ಲಾಹನಲ್ಲಿ ವಿಶ್ವಾಸ ಮತ್ತು ಪ್ರತಿಫಲವನ್ನು ಬಯಸಿ ರಮದಾನ್ ತಿಂಗಳಲ್ಲಿ ರಾತ್ರಿ ಸುನ್ನತ್ ( ತರಾವೀಹ್ ) ನಮಾಝ್ ಮಾಡಿದರೆ ಅವನ ಗತ ಪಾಪಗಳೆಲ್ಲವನ್ನೂ ಮನ್ನಿಸಲ್ಪಡುವುದು ( ಹದೀಸ್ )
ರಮದಾನ್ ನ್ನು ನಮಗೆ ಹೆಚ್ಚು ವ್ಯವಸ್ಥಿತವಾಗಿ ಸದುಪಯೋಗಮಾಡಲು ಕೆಳಗಿನ ಕಾರ್ಯಗಳ ಬಗ್ಗೆ ವಿಶೇಷ ನಾವು ಗಮನಹರಿಸಬೇಕಾಗಿದೆ
-
ತೌಬಾವನ್ನು ಹೆಚ್ಚಿಸುವುದು ,
ರಮದಾನ್ ತೌಬಾದ ತಿಂಗಳಾಗಿದೆ, ಅಲ್ಲಾಹನ ವಿಶೇಶ ಪಾಪ ಮೋಕ್ಷ ಮತ್ತು ಪ್ರಾರ್ಥನೆಗೆ ಉತ್ತರ ಲಭಿಸುವ ಸಮಯವಾಗಿದ್ದು ಹಾಗಾಗಿ ತೌಬಾ ವನ್ನು ದಿನಾಲೂ ಮಾಡಲು ಸ್ವಲ್ಪ ಸಮಯವನ್ನು ವಿನಿಯೋಗಿಸಬೇಕು
-
ಕಣ್ಣು , ಕಿವಿ, ನಾಲಗೆ ಗಳನ್ನು ಹರಾಮ್ ಗಳಿಂದ ಸೂಕ್ಷಿಸುವುದು
-
ಎಲ್ಲಾ ಸುನ್ನತ್ ನಮಾಝ್ ಗಳು ಹಾಗೂ ಇತರ ಸುನ್ನತ್ ಆದ ಕಾರ್ಯಗಳನ್ನು ಹೆಚ್ಚಿಸುವುದು
-
ಪರ್ಳ್ ನಮಾಝ್ ಗಳು ತಕ್ಬೀರತುಲ್ ಇಹ್ರಾಮ್ ನಲ್ಲಿಯೇ ಇಮಾಮ ರೊಂದಿಗೆ ಭಾಗವಹಿಸುವುದು
-
ಪರ್ಳ್ ನಮಾಝ್ ಗಳನ್ನು ಜಮಾ ಅತ್ ಆಗಿ ನಿರ್ವಹಿಸುವುದು
-
ರಮದಾನ್ ನ ರಾತ್ರಿಯಲ್ಲಿ ಇಪ್ಪತ್ತು ರಕ್ ಅತ್ ತರಾವೀಹ್ ಜಮಾಹತ್ ಆಗಿ ನಿರ್ವಹಿಸುವುದು
-
ಪ್ರತಿದಿನ ಕನಿಷ್ಟ ಒಂದು ಜುಝ್ ಹ್ ಕುರಾನ್ ಪಾರಾಯಣ ಮಾಡುವುದು
-
ಕುಟುಂಬ, ನೆರೆಹೊರೆಯವರು ಮತ್ತು ಸ್ನೇಹಿತರೊಂದಿಗೆ ಸಂಭಂಧ ಬೆಳೆಸುವುದು
-
ಪ್ರಭಾತ ಮತ್ತು ಸಂಜೆ ಸಮಯಗಳಲ್ಲಿರುವ ದ್ಸಿಕ್ರ್ ಗಳನ್ನು ರೂಢಿಮಾಡುವುದರೊಂದಿಗೆ ಇತರ ಸಂಧರ್ಭಗಳಲ್ಲಿಯೂ ದ್ಸಿಕ್ರ್ ಮತ್ತು ನಬಿ (ಸ) ರವರ ಮೇಲೆ ಸ್ವಲಾತ್ ಗಳನ್ನು ಹೆಚ್ಚಿಸುವುದು
-
ದರಿದ್ರರಿಗೆ ಮತ್ತು ಅವಶ್ಯಕತೆಯುಳ್ಳವರಿಗೆ ಕನಿಷ್ಟ ಏನಾದರೂ ಸಾಧ್ಯವಾದುದನ್ನು ಕೊಟ್ಟು ಸಹಾಯ ಮಾಡುವುದು
-
ಬೆಳಗ್ಗೆ ಳುಹಾ ಸಮಯದಲ್ಲಿ ಳುಹಾ ನಮಾಝ್ ಮಾಡುವುದು
-
ಇಲ್ಮ್ ನ ಸಭೆಗಳಲ್ಲಿ ಭಾಗವಹಿಸುವುದು ಮತ್ತು ಏನಾದರೂ ಇಲ್ಮ್ ನ ಒಂದು ವಿಷಯವನ್ನು ಕಲಿಯುವುದು
-
ಇಫ್ರಾರ್ ಮಾಡಿಸುವುದು,
-
ಉಪವಾಸ ವನ್ನು ಇಫ್ತಾರ್ ಮಾಡುವ ಕ್ಷಣದಲ್ಲಿ ಅಲ್ಲಾಹನಲ್ಲಿ ಪ್ರಾರ್ಥನೆ ಮಾಡುವುದು, ಪ್ರಸ್ತುತ ಸಮಯದಲ್ಲಿರುವ ಪ್ರಾರ್ಥನೆಗೆ ಉತ್ತರ ಲಭಿಸುತ್ತದೆ
-
ಇಫ್ರಾರ್ ನ್ನು ಮುಂದೂಡದೇ ಸಮಯವಾದ ತಕ್ಷಣವೇ ಮಾಡುವುದು
-
ಸಹರಿ ಮಾಡುವುದನ್ನು ಬೇಗನೇ ಮಾಡದೇ ಸುಬ್ ಹಿ ಅದ್ಸಾನ್ ಆಗುವ ಸ್ವಲ್ಪ ಮುಂಚೆ ಮಾಡುವುದು
-
ಜನರನ್ನು ಒಳಿತಿನ ಕಡೆಗೆ ಅಹ್ವಾನಿಸುವುದು
-
ಮಾತಾಪಿತರಿಗೆ ಮತ್ತು ಹತ್ತಿರದ ಸಂಭಂಧಿಕರಿಗೆ ಒಳ್ಳೆಯದನ್ನು ಮಾಡುವುದು
-
ಮಸೀದಿಯಲ್ಲಿ ಇಹ್ ತಿಕಾಫ್ ಕೂರುವುದು, ವಿಶೇಷವಾಗಿ ರಮದಾನ್ ನ ಕೊನೆಯ ಹತ್ತು ದಿನಗಳಲ್ಲಿ ಇಹ್ ತಿಕಾಫ್ ಕೂರುವುದು
-
ರಮದಾನ್ ನಲ್ಲಿ ನಿರ್ವಹಿಸುವ ಉಮ್ರಾ ಹಜ್ಜ್ ಗೆ ಸಮಾನವಾಗಿದ್ದು, ಆದ್ದರಿಂದ ರಮದಾನ್ ನಲ್ಲಿ ಉಮ್ರಾ ನಿರ್ವಹಿಸುವುದು